ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮಾನೋ ಮೂರ್ತಿ
ಗಾಯನ: ಸೋನು ನಿಗಮ್

ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು 
ಮಾಯದ ಲೋಕದಿಂದ ನನಗಾಗಿ ಬಂದವಳೆಂದು, ಆಹಾ ಎಂಥ ಮಧುರ ಯಾತನೆ 
ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ  | ಅನಿಸುತಿದೆ 

ಸುರಿಯುವ ಸೋನೆಯು ಸೂಸಿದೆ ನಿನ್ನದೆ ಪರಿಮಳ 
ಇನ್ಯಾರ ಕನಸಲು ನೀನು ಹೋದರೆ ತಳಮಳ 
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ 
ನಾ ಖೈದಿ ನೀನೆ ಸೆರೆಮನೆ,  
ತಬ್ಬಿ ನನ್ನ ಅಪ್ಪಿಕೊ ಒಮ್ಮೆ ಹಾಗೆ ಸುಮ್ಮನೆ  | ಅನಿಸುತಿದೆ 

ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ 
ಮನಸಿನ ಪುಟದಲಿ ಕೇವಲ ನಿನ್ನದೆ ಸಹಿಯಿದೆ 
ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ 
ನಿನಗುಂಟೆ ಇದರ ಕಲ್ಪನೆ,  
ನನ್ನ ಹೆಸರ ಕೂಗೆ ಒಮ್ಮೆ, ಹಾಗೆ ಸುಮ್ಮನೆ | ಅನಿಸುತಿದೆ 

ವರ್ಗ:ಚಿತ್ರಗೀತೆಗಳು